ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 2004 ಏಪ್ರಿಲ್ 20 ಮತ್ತು ಏಪ್ರಿಲ್ 26, 2004ರಂದು ಎಲ್ಲಾ 224 ಕ್ಷೇತ್ರಗಳಿಗೂ ನಡೆಯಿತು ಮತ್ತು ಪಲಿತಾಂಶಗಳನ್ನು ಮೇ 13, 2004ರ ಎಣಿಕೆಯ ನಂತರ ಪ್ರಕಟಿಸಲಾಯಿತು. ಯಾವ ಪಕ್ಷಕ್ಕೂ ಸರಕಾರ ರಚಿಸಲು ಅಗತ್ಯ ಬಹುಮತ ಬರಲಿಲ್ಲ. ಭಾರತೀಯ ಜನತಾ ಪಕ್ಷ 79 ಸ್ಥಾನಗಳನ್ನು ಗಳಿಸುವ ಮೂಲಕ ಸ್ಥಾನಗಳಿಕೆಯಲ್ಲಿ ಮೊದಲು, 65 ಸ್ಥಾನ ಗಳಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎರಡನೆಯ ಸ್ಥಾನದಲ್ಲಿಯೂ ಮತ್ತು 58 ಸ್ಥಾನ ಗಳಿಸಿದ ಜನತಾ ದಳ (ಜಾತ್ಯಾತೀತ) ಮೂರನೆಯ ಸ್ಥಾನವನ್ನೂ ಪಡೆದವು. ಕರ್ನಾಟಕದ ಇತಿಹಾಸದಲ್ಲಿ ಮೊದಲ ಸಮಿಶ್ರ ಸರಕಾರ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಜನತಾ ದಳ (ಎಸ್) ನಡುವೆ ಏರ್ಪಟ್ಟು ಧರಮ್ ಸಿಂಗ್ 28 ಮೇ. 2004ರಂದು ಮುಖ್ಯಮಂತ್ರಿಯಾದರು. == ಪಕ್ಷಗಳು ಗಳಿಸಿದ ಸ್ಥಾನಗಳು ಮತ್ತು ಶೇಕಡವಾರು ಮತ == ಪಡೆದ ಸ್ಥಾನಗಳಲ್ಲಿ ಭಾಜಪ ಮುಂದಿದ್ದರೆ ಪಡೆದ ಶೇಕಡವಾರು ಮತಗಳಲ್ಲಿ ಕಾಂಗ್ರೆಸ್ ಮುಂದಿದೆ. ಹಿಂದಿನ ವಿಧಾನ ಸಭೆ ಚುನಾವಣೆಗಳಿಗೆ ಹೋಲಿಸಿದರೆ ಭಾಜಪ ಮತ್ತು ಜೆಡಿ (ಎಸ್) ತಮ್ಮ ಸ್ಥಾನಗಳನ್ನು ಹೆಚ್ಚಿಸಿಕೊಂಡರೆ ಕಾಂಗ್ರೆಸ್‌ನ ಸ್ಥಾನಗಳು ಕಡಿಮೆಯಾಗಿವೆ. == ನಂತರದ ಬೆಳವಣಿಗೆಗಳು == 42 ವಿಧಾನ ಸಭಾ ಸದಸ್ಯರೊಂದಿಗೆ ಸಮಿಶ್ರ ಸರಕಾರದಿಂದ ಹೆಚ್ ಡಿ ಕುಮಾರಸ್ವಾಮಿ ಹೊರನಡೆಯುವದರೊಂದಿಗೆ ಧರಮ್ ಸಿಂಗ್ ನೇತೃತ್ವದ ಸರಕಾರ ಬೀಳುತ್ತದೆ. ರಾಜ್ಯಪಾಲ ಟಿ ಎನ್ ಚತುರ್ವೇದಿಯವರು ಹೆಚ್ ಡಿ ಕುಮಾರಸ್ವಾಮಿಯನ್ನು ತಾ 28 ಜನವರಿ, 2006ರಕ್ಕೆ ಆಹ್ವಾನಿಸುತ್ತಾರೆ. ಭಾಜಪ ಮತ್ತು ಜೆಡಿ(ಎಸ್) ನಡುವಿನ ಒಪ್ಪದವೇರ್ಪಟ್ಟು ಹೆಚ್‌ ಡಿ ಕುಮಾರಸ್ವಾಮಿ 4 ಫೆಬ್ರವರಿ, 2006 ರಿಂದ 9 ಅಕ್ಟೋಬರ್, 2007ರ ವರೆಗೂ ಮುಖ್ಯಮಂತ್ರಿಯಾಗುತ್ತಾರೆ. ಆದರೆ ಅವರ ಅವಧಿಯ 20 ತಿಂಗಳ ನಂತರ ಅಧಿಕಾರ ವರ್ಗಾವಣೆಗೆ ನಿರಾಕರಿಸುತ್ತಾರೆ. ನಂತರದಲ್ಲಿ ಮತ್ತೆ ಭಾಜಪದೊಂದಿಗೆ ಒಪ್ಪಂದಕ್ಕೆ ಬಂದು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಲೂ ಅಧಿಕಾರ ಹಂಚಿಕೆಯ ಭಿನ್ನಾಭಿಪ್ರಾಯದಲ್ಲಿ ಜೆಡಿ (ಎಸ್) ಮತ್ತೆ ಬೆಂಬಲ ವಾಪಾಸು ಪಡೆಯುತ್ತದೆ. == ಆಧಾರ == " , 2004 " 2010-10-06 ವೇಬ್ಯಾಕ್ ಮೆಷಿನ್ ನಲ್ಲಿ. , 2016-10-24 2004 2016-10-24 2016-10-24